ಅಮ್ಮಸಂದ್ರ

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಗೆ ಸೇರಿದ್ದು ತುಮಕೂರಿಗೆ ಸುಮಾರು (25) ಮೈ. ದೂರದಲ್ಲಿದೆ. ಹತ್ತಿರದಲ್ಲಿರುವ ನರಸಿಂಹಸ್ವಾಮಿ ಬೆಟ್ಟದ ಉದ್ದಕ್ಕೂ ಮ್ಯಾಂಗನೀಸ್, ಸುಣ್ಣಕಲ್ಲು ಹೇರಳವಾಗಿ ದೊರೆಯುತ್ತವೆ.

	ಕಚ್ಚಾ ವಸ್ತುಗಳು ಸುಲಭವಾಗಿ ದೊರೆಯುವುದರಿಂದಲೂ ಮತ್ತು ಸಂಚಾರ ಸೌಲಭ್ಯ ಚೆನ್ನಾಗಿರುವುದಿಂದಲೂ ಬಿರ್ಲಾ ಸಂಸ್ಥೆ ಇಲ್ಲೊಂದು ಸಿಮೆಂಟ್ ಕಾರ್ಖಾನೆಯನ್ನು ಸ್ಥಾಪಿಸಿದೆ. ಈ ಕಾರ್ಖಾನೆ ಮೈಸೂರು ರಾಜ್ಯದ ಬಹುಪಾಲು ಸಿಮೆಂಟ್ ಅಗತ್ಯವನ್ನೇ ಪೂರೈಸುತ್ತದೆ.          								   
 (ಪಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ